ತಾಲೆನೈಟ್ -
	ಯಿಟ್ರಿಯಮ್ ಸಿಲಿಕೇಟಿನ ಖನಿಜ.  ಇದರ ರಾಸಾಯನಿಕ ಸೂತ್ರ ಙ2Si2ಔ7, ಸಾಮಾನ್ಯವಾಗಿ ಚಪ್ಪಟೆ ಅಥವಾ ಅಶ್ರಗ ರೂಪದಲ್ಲಿ ದೊರೆಯುವುದು. ಇದು ಮಾನೊಕ್ಲೈನಿಕ್ ಗಣದಲ್ಲಿ ಸ್ಫಟಿಕಗೊಳ್ಳುತ್ತದೆ.  ಮಾಂಸದ ಕೆಂಬಣ್ಣದ ತಾಲೆನೈಟ್ ಖನಿಜದ ಕಾಠಿಣ್ಯಾಂಕ 6.5 ಹಾಗೂ ಸಾಪೇಕ್ಷ ಸಾಂದ್ರತೆ 4.2. ಸ್ವೀಡನ್ನಿನ ಉಪ್ಸಲದ ಓಸ್ಟೆರಬೈನಲ್ಲಿ, ವರ್ಮ್‍ಲ್ಯಾಂಡಿನ ಅಸ್ಕಾಗೆನ್‍ನಲ್ಲಿ ಹಾಗೂ ಉತ್ತರ ನಾರ್ವೆಯ ಹುಂಡೋಲೆಮೆನ್ ಪ್ರದೇಶಗಳಲ್ಲಿ ತಾಲೆನೈಟ್, ದೊರೆಯುತ್ತದೆ. 					(ಟಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ